Tuesday, December 9, 2008

Tirukana Kanasu

ತಿರುಕನೋರ್ವ ಊರಿನಲ್ಲಿ
ಮುರುಕು ಕಂಪ್ನಿ ಒಂದರಲ್ಲಿ
ಹೊತ್ತು ಕಳೆಯಲೆಂದು
ಬಹಳವರುಷ ಕೊಳೆಯುತಿದ್ದನು


ಹೇಳುವವರು ಯಾರೂ ಇಲ್ಲ
ಕೇಳುವವರು ಮೊದಲೆ ಇಲ್ಲ
ಚಿಲ್ರೆ ಕಾಸ ಮೇಲೆ ಆಸೆ
ಬೆಂಚ ಮೇಲೆ ಕುಳಿತು ಕುಣಿದು
ಹಾಗು ಹೀಗು ಕಾಲವನ್ನು
ತಳ್ಳುತಿದ್ದನು


ಸಾಹುಕಾರನೊಬ್ಬ ಬಂದ
ಮುರುಕು ಕಂಪ್ನಿ ತಾ ಎಂದ
ನಿನ್ನ ನುಂಗಿ ನೀರು ಕುಡಿದು
ದೊಡ್ಡದಾಗಿ ಬೆಳೆವೆ ಎಂದ

ತಿರುಕನಲ್ಲಿ ಆಸೆ ಹುಟ್ಟಿ
ಕಂತೆ ಕಂತೆ ನೋಟು ಎಣಿಪ
ಭಾಗ್ಯ ತನ್ನದಾಯಿತೆಂದು
ಹಿಗ್ಗಿ ಹೀರೆಕಾಯಿಯಾದ
ತನ್ನ ಕೆಲಸ ಹೋಗಲೆಂದು
ದೇವರಲ್ಲಿ, ದಿಂಡರಲ್ಲಿ
ಹೇಳಿಕೊಂಡನು


ಸಾಲ ಹುಟ್ಟಲಿಲ್ಲ ಎಂದು
ಸಾಹುಕಾರ ಕೈಯ ತೊಳೆದ
ನೋಟಗಂಟು ಕೈಗೆ ಸಿಗದೆ
ಅಡಗಿಕೊಳಲು ಕನ್ನಡಿ ಒಳಗೆ
ಸಿಟ್ಟಿನಿಂದ ಎದ್ದು ಒದ್ದ
ಎದುರು ಕುಂತ ಮಾನೀಟರನು
ಬೆಂಚ ಮೇಲೆ ಮಲಗಿ ಕನಸ
ಕಾಣುತಿದ್ದ ತಿರುಕನು

----------------------------
Ravi
8th Dec, 2008

3 comments:

Unknown said...

Too Good.
Hats off to your creativity :)

Ravikumara said...

Thumba chennagidhe.. Arthapoornavaagidhe.. ishta aaythu Ravi...

Nayana Rayasam said...

Hi raviyavare,
tumba chenagide nimma tirukana kanasu, bahala sarala, mattu bahala arthapoorna vagide.
good poem

nayana rayasam